ಅಕ್ಷರ ಗಾರುಡಿಗ
ವಿಶ್ವೇಶ್ವರ ಭಟ್ಟರ 'Selfi ವಿಥ್ ಲೈಫ್'.
ಈಗ ಬಿಡುಗಡೆಯಾದ ಈ ಪುಸ್ತಕದ ಓದು ತುಂಬಾ ಖುಷಿಕೊಟ್ಟಿದೆ. ಭಟ್ಟರಿಗೆ ಅಕ್ಷರದ ಮೂಲಕ ಜನಮನ ತಲುಪುವ ಕಲೆ ಕರಗತವಾಗಿದೆ. ಇವರ ಬರವಣಿಗೆಯ ಓದು ವಿಸ್ಮಯಕಾರಿ ಆನಂದವನ್ನು ಕೊಡುತ್ತದೆ. ಬದುಕು ಮತ್ತು ಕೆಲಸದ ಬಗ್ಗೆ ಅದಮ್ಯ ಪ್ರೀತಿ, ಉತ್ಸಾಹ ಮೂಡಿಸುತ್ತದೆ, ಹುರುಪಿಸಿ ಪ್ರೋತ್ಸಾಹ ತುಂಬುತ್ತದೆ. ಸಂಪೂರ್ಣ ಸಕಾರಾತ್ಮಕವೇ ಇವರ ಬರವಣಿಗೆಯಲ್ಲಿ ಸೂಸುತ್ತದೆ. ಘನ ಗಂಭೀರ ವಿಷಯಗಳನ್ನೂ ಅತ್ಯಂತ ಸರಳ ಹಾಗು ನೇರ ಭಾಷೆಯಲ್ಲಿ ನಮ್ಮ ಬುದ್ಧಿ ಭಾವವನ್ನು ತಲುಪುತ್ತಾರೆ. ಇವು ಕೆಲವೊಮ್ಮೆ ಭೋದಪ್ರದವಾಗಿಯೂ, ಕೆಲವೊಮ್ಮೆ ಸ್ನೇಹಮಯಿ ಹಂಚಿಕೆಯಾಗಿಯೂ ಹೊರಹುಮ್ಮುತ್ತದೆ.
ಭಟ್ಟರು ಪ್ರತಿ ಮಾತನ್ನೂ ಹಲವು ದೃಷ್ಟಾಂತ ಗಳಿಂದ - ಘಟನೆ, ಸಂದರ್ಶನ, ತಜ್ಞರ ಅಭಿಪ್ರಾಯ, ಸ್ವಂತ ಅನುಭವ ಗಳಿಂದ - ವಿಶದ ಗೊಳಿಸುತ್ತಾರೆ. ಅಧ್ಯಾಯ ೧೪: 'ಘಟನೆಗಳು ಘಟನೆಗಳಷ್ಟೇ ಅಲ್ಲ; ಅವು ಭಾವ-ಬದುಕಿನ ರಸಘಟ್ಟಿಗಳು' ಒಂದು ಶ್ರೇಷ್ಠ ಕಾದಂಬರಿಯ ತುಣುಕು. ಅಧ್ಯಾಯ ೧೬: 'ಇಮೇಲ್ ನಿಂದ ಕೆಲಸ ಮಾಡಿಸಿಕೊಳ್ಳಬೇಕೇ ಹೊರತು ಇಮೇಲ್ ಮಾಡುವುದೇ ಕೆಲಸವಾಗಬಾರದು' ಒಂದು ಶ್ರೇಷ್ಠ ತರಗತಿಯ ಪಾಠ, ಎಂಬಿಎ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ.
ಪುಸ್ತಕದ ವಿನ್ಯಾಸ, ಅಕ್ಷರದ ಗಾತ್ರ, ಪದ ಮತ್ತು ಸಾಲಿನ ಮಧ್ಯದ ಅಂತರ, ಎಲ್ಲವೂ ಓದನ್ನು ಆಹ್ಲಾದಕರವಾಗಿಸುತ್ತದೆ.
ಇಂತಹ ಸೊಗಸಾದ ಕೃತಿಯನ್ನು ಕೊಟ್ಟ ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆಗಳು. ಸುಂದರವಾಗಿ ಪುಸ್ತಕ ಮಾಡಿಕೊಟ್ಟ ಸಾವಣ್ಣ ಪ್ರಕಾಶಕರು ಪ್ರಶಂಶಾರ್ಹರು.
No comments:
Post a Comment