Saturday, November 25, 2017

Jogi's new book: pritisuvavarannu kondubidi

ಶೋಧಕ ಜೋಗಿ.
ಜೋಗಿ ಅವರ "ಪ್ರೀತಿಸುವವರನ್ನು ಕೊಂದುಬಿಡಿ- ನಾನು ನೀನು ಸಾಯದೆ ಸ್ವರ್ಗವಿಲ್ಲ!"
ಪುಸ್ತಕಕ್ಕೆ ಎಂತಹ ಕರ್ಕಶ, ಕಾನೂನು ಭಾಹಿರ ಹೆಸರು! ಏನೋ ಭಯಂಕರ ಭೀಭತ್ಸ ಕಾದಿದೆ ಎಂತಲೇ ಪುಸ್ತಕ ಬಿಚ್ಚಿದೆ. ಅಲ್ಲವೇ ಅಲ್ಲ. ಬದುಕಿನಲ್ಲಿ ಅಂದುಕೊಂಡ ಮಧುರ ಭಾವ, ಪ್ರೀತಿ-ಪ್ರೇಮ ಪ್ರಪಂಚ ರಹಸ್ಯದ ಶೋಧನೆ, ಅವುಗಳ ಪ್ರಶ್ನೆ ಸವಾಲುಗಳು ಪುಟ ಪುಟದಲ್ಲೂ ತೆರೆದುಕೊಳ್ಳುತ್ತವೆ. ಆಳವಾಗಿ ನಮ್ಮನ್ನು ಕೆದಕುತ್ತವೆ, ಆವರಿಸುತ್ತವೆ. ಪ್ರೀತಿಯ ಕಲ್ಪನೆ-ವಾಸ್ತವ; ಮನೆತನ, ಸಂಪ್ರದಾಯ-ಪ್ರೀತಿ, ಪ್ರೇಮ ಗಳ ವೈರುಧ್ಯವಿರುವಾಗ ಅವುಗಳಲ್ಲಿ ಒಂದನ್ನು ನಮ್ಮಲ್ಲೇ ಕೊಂದುಕೊಳ್ಳದಿರುವಾಗ ಬದುಕು ದುಸ್ತರವಾಗುತ್ತದೆ. ಒಂದೊಂದು ಕತೆಯೂ ಪ್ರೀತಿಯ ಹಲವು ಮಜಲುಗಳನ್ನು ಬಿಚ್ಚಿಡುತ್ತಾ ಪ್ರಶ್ನಾರ್ಥಕವಾಗಿ ಮುಗಿಯುತ್ತದೆ. ಕಾಮು ವಿನ ಕತೆಯೊಂದನ್ನು ಹೇಳುತ್ತಾ ಹೇಗೆ ಮಗನ ಮೇಲಿನ ಪ್ರೀತಿಯೇ ಮಗನನ್ನು ಕೋಂದೇ ಹಾಕಿಬಿಡುತ್ತೆ, ಅದು ಈಡಿಪಸ್ ನಂತೆ ಅಜ್ಞಾತವಾಗಿದ್ದರೂ ಬದುಕಿನ ವಾಸ್ತವ ವನ್ನು ಸಾರಿ ಹೇಳುತ್ತದೆ, ಎಂಬುದನ್ನು ಅತ್ಯಂತ ಮಾರ್ಮಿಕವಾಗಿ ತೋರಿದ್ದಾರೆ ಜೋಗಿ.
ಪ್ರೀತಿ ಮಾತು ಬಂದಾಗ ಎಷ್ಟೋ ದಶಕಗಳ ಹಿಂದೆ ಓದಿದ ಬೇಂದ್ರೆ ಯವರ ಕವಿತೆಯೊಂದು ನನ್ನ ನೆನಪಿನಲ್ಲಿ ಈಗ ಹೀಗಿದೆ:
ಪ್ರೀತಿಯೆಂಬೆ
ಕಪ್ಪೂರದ ಬೊಂಬೆ
ಸುಂದರವಾದುದು ಜ್ಯೋತಿಯನ್ನು, ಸುವಾಸನೆಯನ್ನು ಬೀರುತ್ತಾ ತನ್ನನ್ನೇ ಕರಗಿಸಿಕೊಂಡು ಅವಸಾನವಾಗಿಬಿಡುತ್ತದೆ ಕರ್ಪೂರದ ಬೊಂಬೆ. ಕ್ಷಣಿಕ. ಪ್ರೀತಿಯೂ ಹಾಗೆ!
ಪ್ರೀತಿಯ ಬದುಕನ್ನು ತೀವ್ರವಾಗಿ ಜಾಲಾಡಿ ಒಂದು ಗಾಢವಾದ ಎಚ್ಚರವನ್ನು ತುಂಬಾ ಯಶಸ್ವಿಯಾಗಿ ಕೊಟ್ಟಿದ್ದಾರೆ ಜೋಗಿ ಈ ಕೃತಿಯಲ್ಲಿ. ಭಲೇ ಜೋಗಿ

No comments: