Wednesday, March 30, 2016

Jogi's new book "tandetayi devaralla".


ಜೋಗಿ ಅವರ ಪುಸ್ತಕ: ತಂದೆತಾಯಿ ದೇವರಲ್ಲ! ~ ಪೂಜಿಸಬೇಡಿ, ಪ್ರೀತಿಸಿ ~

ತುಂಬ ಇಷ್ಟವಾದ ಕೃತಿ. ಜೋಗಿ ಇಂದಿನ ಸನ್ನಿವೇಶ, ಘಟನೆ, ವಿದ್ಯಮಾನಗಳನ್ನು ಅಂತರಂಗದ ಕಣ್ಣಿನಿಂದ ನೋಡುತ್ತಾ ಹೋಗುತ್ತಾರೆ . ಇಂದಿನ ಸ್ತಿತಿಗತಿಗಳ ಸಾಮಾಜಿಕ ಮತ್ತು ಮಾನಸಿಕ ಸ್ತರಗಳನ್ನು  ಅವಲೋಖಿಸುತ್ತಾರೆ. ಮನೆ-ಸಂಸಾರ, ತಂದೆತಾಯಿ-ಮಕ್ಕಳು, ಕಲಿಕೆ-ಶಿಕ್ಷಣ, ಉದ್ಯೋಗ-ಕೆಲಸ, ಸಾರಿಗೆ-ಸಂಚಾರ, ಜೀವನ-ಬದುಕು, ಹಳ್ಳಿ-ಪಟ್ಟಣ, ಹಿಂದಿನದು-ಇಂದಿನದು ಹೀಗೆ ಹಲವಾರು ವಿಷಯಗಳ ಬಗ್ಗೆ ಅವರ ವಿಚಾರ-ವಿಶ್ಲೇಷಣೆ ನೀಡಿದ್ದಾರೆ. ಇಂದಿನ ಬದುಕಿನ ತಲ್ಲಣ, ಶುಷ್ಕತೆಯನ್ನು ಹೇಳುತ್ತಾ ಅವುಗಳ ಪರಿಹಾರೋಪಾಯಗಳನ್ನು ಹೇಳಲು ಹಿಂಜರಿಯುವುದಿಲ್ಲ. ಘನ-ಗಂಭೀರ ವಿಷಯಗಳನ್ನು ಅತ್ಯಂತ ಸರಳ ಹಾಗೂ ತಕ್ಷಣ ತಿಳಿವಳಿಕೆ ಮೂಡಿಸುವ ಸುಂದರ ಕನ್ನಡ ನಮ್ಮನ್ನು ಸಲಿಲವಾಗಿ ಓದಿಸಿಕೊಂಡು ಹೋಗುತ್ತದೆ. ನಮ್ಮನ್ನು ಅಂತರಾಳಕ್ಕೆ ಕೊಂಡೊಯ್ಯುವ ಅದ್ಭುತ ಮಾತುಗಳಿವೆ: 'ಹಾರುತ್ತಿರಬೇಕು. ಬಾಣ ಬಂದು ಬೀಳಿಸುವ ತನಕ ಆಕಾಶ ನಮ್ಮದು'(ಪು.೫೫).  ನಮ್ಮನ್ನು ತಾಕಲಾಡಿಸುವ ಪ್ರಖರವಾದ ವಿಚಾರಗಳಿವೆ: ವಾಸ್ತವದಲ್ಲಿ, ನೋಡಿ ಕಾಣುವುದರಲ್ಲಿ, ಕೊರತೆ, ನ್ಯೂನತೆ  ಗಳಿರುತ್ತವೆ, ಕಲ್ಪನೆ, ಕ್ರಿಯಾತ್ಮಕತೆಯಲ್ಲಿ ಮಾತ್ರ ಪರಿಪೂರ್ಣತೆ ಕಾಣಬಹುದು(ಪು ೧೮೧). 'ಶಾಪ ಪಡೆಯದೆ ದೇವತೆ ಮನುಷ್ಯನಾಗಲಾರ, ಸಾಯದೇ ಮನುಷ್ಯ ದೇವನಾಗಲಾರ' (ಪು ೧೭೯). 

ಪುಸ್ತಕದ ವಿನ್ಯಾಸ, ಮುದ್ರಣ ತುಂಬಾ ಚೆನ್ನಾಗಿದೆ. 

ಆಪ್ಯಾಯಮಾನವಾದ ಬರವಣಿಗೆಯ ಈ ಕೃತಿ ಕೊಟ್ಟ ಜೋಗಿಯವರಿಗೆ ಹಾರ್ದಿಕ ಅಭಿನಂದನೆಗಳು. ಸಾವಣ್ಣ ಪ್ರಕಾಶಕರೂಅಭಿನಂದನಾರ್ಹರು.

No comments: