Sunday, October 31, 2010

KANNADA RAJYOTSAVA 54: WHITHER HIGHER EDUCATION

Invited article on the eve of the Karnataka Rajytsava Day 2010 published in the current issue of Vijaya Next.

ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕ , ವಿದ್ಯಾರ್ಥಿಯೇ ಮುಖ್ಯ ಅವರೇ ಕೇಂದ್ರೀಕೃತ ವಾಗಬೇಕು.   ಶಿಕ್ಶಕ ತಯಾರಿಸಿದ ಪಠ್ಯ ಎಂಬುದು ವಿಧಾನಸೌಧಕ್ಕೆ ಪರಿಶೀಲನೆಗೆ ಹೋದರೆ ಅಲ್ಲಿ ಏನು ಮೌಲ್ಯ ಸೇರ್ಪಡೆ ಆಗುತ್ತೆ ಹೇಳಿ.? ಶಿಕ್ಶಕನ ಉತ್ಸಾಹವನ್ನೇ ಕೊಂದು ಹಾಕಿದರೆ ಶಿಕ್ಷಣದ ಅಭಿವೃದ್ಧಿ ಹೇಗೆ ಸಾಧ್ಯ? ಶೈಕ್ಷಣಿಕ ವಿಚಾರದಲ್ಲಿ ಸ್ವಾಯತ್ತತೆ, ಸ್ವಾತಂತ್ರ್ಯವಿದ್ದಾಗ ಶಿಕ್ಶಕ ತನ್ನನ್ನು ತೊಡಗಿಸಿಕೊಂಡು ಜವಾಬ್ದಾರಿ ಹೊರುತ್ತಾನೆ. ಈಗ ಎಲ್ಲದಕ್ಕೂ ಸರ್ಕಾರದ ಅನುಮತಿ ಬೇಕು. ಇದರಿಂದಾಗಿ ಶಿಕ್ಶಣದ ಉನ್ನತಿಗೆ ದುಡಿದವರು ಮೂಲೆಗೆ ಸೇರಿದ್ದಾರೆ. ಒಬ್ಬ ಶಿಕ್ಶಕ ಮತ್ತೊಬ್ಬರ ಅಡಿಯಾಳಾಗಿ ಕೆಲಸ ಮಾದುವ ಸ್ತಿತಿ ಇದೆ. ಇದಾಗಬಾರದು.

ಉನ್ನತ ಶಿಕ್ಶಣದ ಸ್ತಿತಿ ಗತಿ ಬಗ್ಗೆ ಇಲ್ಲಿ ಸ್ಥೂಲವಾಗಿ ಹೇಳಲು ಬಯಸುತ್ತೇನೆ. ದೇಶದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮೊದಲಿನಿಂದಲೂ ಶಿಕ್ಶಣದಲ್ಲಿ ಅದರಲ್ಲೂ ಉನ್ನತ ಶಿಕ್ಶಣದಲ್ಲಿ ಮುಂಚೂಣಿಯಲ್ಲಿತ್ತು.ಮುಮ್ಮುಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿನ ಮಹರಾಜ ಕಾಲೇಜು ಕಲಾ ವಿಭಾಗದಲ್ಲಿ, ಬೆಂಗಳೂರಿನ ಸೆಂಟ್ರಲ್ ಕಾಲೇಜು ವಿಜ್ನಾನ ವಿಭಾಗದಲ್ಲಿ ಹೆಸರಾಗಿತ್ತು. ಮಹರಾಜ ಕಾಲೇಜಿನಲ್ಲಿ ಡಾ. ರಾಧಾಕೃಷ್ನನ್, ಪುರುಷೋತ್ತಮ್, ಗೋಪಾಲಸ್ವಾಮಿ, ಕುವೆಂಪು, ತೀನಂಶ್ರೀ, ಡಿ. ಎಲ್. ನರಸಿಂಹಾಚಾರ್, ಸಿ. ಡಿ. ನರಸಿಂಹಯ್ಯ, ಅನಂತಮೂರ್ತಿ ಅಂಥವರು ಪಾಠ ಮಾಡುತ್ತಿದ್ದರು. ಜಿ. ಪಿ. ರಾಜರತ್ನಂ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪಾಠ ಹೇಳುತ್ತಿದ್ದರು.ಮುಮ್ಮುಡಿ ಕೃಷ್ಣರಾಜ ಒಡೆಯರು ಶಿಕ್ಶಣ ಕ್ಶೇತ್ರದ ಉನ್ನತಿಗೆ ಬೆಂಬಲವಾಗಿ ನಿಂತಿದ್ದರು. ಶಿಕ್ಷಣ ತಜ್ನರೇ ಈ ಕ್ಶೇತ್ರದ ಬಗ್ಗೆ ನಿರ್ಧರಿಸುತ್ತಿದ್ದರು.ಮಹಾರಾಜರು ಉನ್ನತ ಶಿಕ್ಶಣ ಕ್ಶೇತ್ರಕ್ಕೆ ಸ್ವಾಯತ್ತತೆ ಹಾಗೂ ಗೌರವ ನೀಡುತ್ತಿದ್ದರು.

ಹೀಗಿದ್ದ ರಾಜ್ಯದ ಉನ್ನತ ಶಿಕ್ಶಣ ಕ್ಶೇತ್ರದ ಮುಂದಿನ ನಡೆ ಏನಾಯಿತು? ಕ್ರಮೇಣ ಅವನತಿ ಹಾದಿ ಹಿಡಿಯಿತು. ಉನ್ನತ ಶಿಕ್ಶಣ ನೌಕರಶಾಹಿ ಹಾಗೂ ರಾಜಕೀಯ ನಿಯಂತ್ರಣಕ್ಕೆ ಒಳಪಟ್ಟಿತು.ಇದರಿಂದ ಶಿಕ್ಶಣದ ಗುಣಮಟ್ಟ ಉತ್ತಮವಾಗಲಿಲ್ಲ. ೧೯೭೬ ನೇ ಇಸವಿಯಲ್ಲಿ ಅಂದಿನ ರಾಜ್ಯ ಸರ್ಕಾರ ಉನ್ನತ ಶಿಕ್ಶಣದ ಬಗ್ಗೆ ಸಮಗ್ರ ಕಾಯ್ದೆ ತಂದಿತು.ಅಲ್ಲಿಯವರೆಗೂ ಪ್ರತಿ ವಿಶ್ವವಿದ್ಯಾಲಯಕ್ಕೂ ಅದರದೇ ಆದ ಕಾಯ್ದೆಗಳಿದ್ದವು. ತನ್ನ ವಿವಿಗೆ ಯಾರು ಕುಲಪತಿ ಆಗಬೇಕೆಂಬುದನ್ನು ಅವರೇ ನಿರ್ಧರಿಸುತ್ತಿದ್ದರು. ಆದರೆ, ೧೯೭೬ರ ಕಾಯ್ದೆಯಿಂದ ವಿವಿಗಳ ಮೇಲೆ ಸರ್ಕಾರದ ನಿಯಂತ್ರಣ ದೊಡ್ಡ ಪ್ರಮಾಣದಲ್ಲಾಯಿತು. ಶೈಕ್ಷಣಿಕ ಸ್ವಾಯತ್ತತೆ ಮೊಟಕಾಯಿತು. ವಿವಿಯ ಸ್ವತಂತ್ರ ದೃಷ್ಟಿ ಹಾಗೂ ಸ್ವಾಯತ್ತತೆಗೆ ಈ ಕಾಯ್ದೆಯಿಂದ ಏಟು ಬಿತ್ತು.

ನಂತರ ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ ೨೦೦೦ ಬಂತು. ಇದರಿಂದ ಸರ್ಕಾರದ ನಿಯಂತ್ರಣ ಇನ್ನಷ್ಟು ಬಿಗಿಯಾಯಿತು. ಈ ಎರದೂ ಕಾಯ್ದೆಗಳನ್ನು ತಜ್ನರ ಶಿಫಾರಸ್ಸಿನ ಮೇರೆಗೆ ಎಂದು ಸರ್ಕಾರ ತೋರುಗಾಣಿಕೆಗೆ ಹೇಳಿತು. ರಾಜಕಾರಣಿಗಳು ತಜ್ನರ ಶಿಫಾರಿಸ್ಸಿನಲ್ಲಿ ತಮಗೆ ಲಾಭವಾಗಿರುವ ಅಂಶವನ್ನು ಜಾರಿ ಮಾಡಿ ಅನುಕೂಲ ಅಲ್ಲದಿರುವುದನ್ನು ಕೈ ಬಿದುತ್ತಾರೆ. ಉದಾಹರಣೆಗೆ ನವನೀತರಾವ್ ಸಮಿತಿ ವರದಿ ಅನ್ವಯ ವಿಶ್ವವಿದ್ಯಾಲಯಗಳ ಸೆನೆಟ್ ರದ್ದು ಪಡಿಸಿದ ಸರ್ಕಾರ ಕುಲಪತಿಗಳ ನೇಮಕ ವಿಚಾರದಲ್ಲಿ ಈ ಸಮಿತಿಯ ಶಿಫಾರಸ್ಸಿಗೆ ತದ್ವಿರುದ್ಧ ನಿರ್ಧಾರ ಕೈಗೊಂಡಿತು. ಇದು ಶೈಕ್ಶಣಿಕ ಸಮಿತಿಗೆ ಸರ್ಕಾರ ಮಾಡಿದ ಅನ್ಯಾಯ.

ರಾಜ್ಯ ಸರ್ಕಾರದ ೨೦೦೦ನೇ ಕಾಯ್ದೆಯಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲರು ಸರ್ಕಾರದ ಸಮ್ಮತಿ ಮೇರೆಗೆ ವಿವಿಗಳಿಗೆ ಕುಲಪತಿ ನೇಮಿಸಬೇಕು ಎಂದಿದೆ. ಇನ್ನು ಈ ಕಾಯ್ದೆಯಲ್ಲಿ ಕುಲಪತಿಗಳ ಆಯ್ಕೆಶೋಧ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿ ಇರುವಂತೆ ನೋಡಿಕೊಳ್ಳಲಾಗಿದೆ. ಈ ಕಾಯ್ದೆಯಿಂದ ಉನ್ನತ ಶಿಕ್ಶಣದ ಮೇಲಿನ ಸಂಪೂರ್ಣ ಹತೋಟಿಯನ್ನು ಸರ್ಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರಿಂದ ಉನ್ನತ ಶಿಕ್ಶಣ ಕ್ಶೇತ್ರ ಸಂಪೂರ್ಣ ಕುಲಷಿತವಾಗಿದೆ. ಕಸ್ತೂರಿ ರಂಗನ್ ನೇತ್ರತ್ವದ ಜ್ನಾನ ಆಯೋಗ ರಚಿಸಿದ ಉಪಸಮಿತಿ ಕೂಡ ಮೊಟ್ಟ ಮೊದಲು ಹೇಳಿದ್ದ್ದು ಶಿಕ್ಶಣದ ಶ್ರೇಷ್ಟತೆ ಬೆಳೆಯಲು ೨೦೦೦ನೇ ಇಸವಿಯ ಕಾಯ್ದೆ ಬದಲಿಸಬೇಕು ಎಂಬುದನ್ನೇ.

ಶಿಕ್ಶಣದ ಉನ್ನತೀಕರಣಕ್ಕೆ ಸೃಜನಶೀಲತೆಯೇ ಸೋಪಾನ. ನಾವು ಆ ಸೃಜನಶೀಲತೆಯನ್ನು ಹಾಳುಮಾಡುತ್ತಿದ್ದೇವೆ. ಪರರ ಓಲೈಕೆಯಿಂದ ಮುಂದೆ ಬರ್ತೀವಿ ಎನ್ನುವ ವಾತಾವರಣ ಶಿಕ್ಶಣ ವಲಯದಲ್ಲಿ ಸೃಷ್ಟಿಯಾಗಿದೆ. ಶಿಕ್ಶಣ ರಂಗದಲ್ಲಿ ಶೈಕ್ಶಣಿಕ ಮಾನದಂಡವೇ ಕಡೆಯ ಮಾತಾಗಿರಬೇಕು. ವಿಶ್ವವಿದ್ಯಾಲಯಗಳ ಹೊಣೆಗಾರಿಕೆಯಲ್ಲಿ ತಪ್ಪಾದಾಗ ಮಾತ್ರ ಸರ್ಕಾರ ಮಧ್ಯೆ ಪ್ರವೇಶಿಸಲಿ. ಅದು ಬಿಟ್ಟು ಸರ್ಕಾರದ ಹಸ್ತಕ್ಶೇಪ ಸಲ್ಲದು.

ಶಿಕ್ಶಣ ಕ್ಶೇತ್ರದಲ್ಲಿ ತ್ವರಿತವಾಗಿ ಆಗಬೇಕಿರುವುದು ಶಿಕ್ಷಕರ ಸಬಲೀಕರಣ, ಬೋಧನಾ ಕ್ರಮದಲ್ಲಿ ತರಬೇತಿ, ವಿದ್ಯಾರ್ಥಿಗಳಿಗೆ ಆಯ್ಕೆ ಆಧಾರಿತ ಗಣಿಕೆ ಪದ್ಧತಿಯ ಪಠ್ಯ. ವಿದ್ಯಾರ್ಥಿ - ಶಿಕ್ಷಕ ಕೇಂದ್ರಿತ/ಆದ್ಯತೆಯ ಶಿಕ್ಶಣ ವ್ಯವಸ್ಥೆ ರೂಪಿಸಬೇಕು.
      

No comments: