Friday, June 4, 2010

Foreword to a book on UGK

ಯುಜಿಹೊಗೆಯಿಲ್ಲದ ಜ್ವಾಲೆ
ಎಸ್. . ಶಾಮರಾವ್


                        ಮುನ್ನುಡಿ

ನಾಯಮಾತ್ಮಾ ಪ್ರವಚನೇನೆ ಲಭ್ಯೋ ನ ಮೇಧಯಾ ನ ಬಹುನಾ ಶೃತೇನ
ಯ ಮೇ ವೈಶ ವೃಣುತೇ ತೇನ ಲಭ್ಯಸ್ತಸ್ರೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್                                   (ಕಠೋಪನಿಷತ್ ೧..೨೩.)
ಆತ್ಮಪ್ರವಚನದಿಂದ ಲಭ್ಯನಲ್ಲ. ಮೇಧಾ ಶಕ್ತಿಯಿಂದಲೂ  ಶ್ರವಣ ದಿಂದಲೂ ಲಭ್ಯನಲ್ಲ. ‘ಆತ್ಮನ ಅನುಗ್ರಹ/ಆಯ್ಕೆ ಯಿಂದ ಮಾತ್ರ ಲಭ್ಯನು. ಅವನಿಗೆ ಆತ್ಮನು ತನ್ನ ತನುವನ್ನೇ ತೋರುತ್ತಾನೆ.
                          ---
ಸಹಜ ಸ್ಥಿತಿಯ ಸಾಕ್ಷಾತ್ಕಾರ ಯುಜಿ. ಇವರ ಬದುಕು ವಿಚಾರವನ್ನು ಮನ ತಟ್ಟುವಂತೆ ನಮಗೆ ಮುಟ್ಟಿಸಿದ್ದಾರೆ ಶ್ರೀ ಶಾಮರಾಯರು ಈ ಪುಸ್ತಕದಲ್ಲಿ.

2
ಶಾಮರಾಯರು ಯುಜಿ ಅವರನ್ನು ನಿಕಟವಾದ ಸಂಪರ್ಕದಿಂದ ಬಲ್ಲವರು, ಯುಜಿಯವರ ದೇಹ ಬುದ್ಧಿ ಮನಸ್ಸುಗಳನ್ನು ಹಲವು ಸ್ತರದಲ್ಲಿ ಕಂಡಿದ್ದಾರೆ. ಕಂಡಿದ್ದನ್ನು ನಮ್ಮ ಪರಂಪರೆಯ ಜ್ಞಾನ, ಪರಿಶ್ರಮದ ಹಿನ್ನಲೆಯಲ್ಲಿ ನಮಗೆ ಪರಿಚಯಿಸಿದ್ದಾರೆ. ಈ ದಿಸೆಯಲ್ಲಿ ಈ ಕೃತಿ ವಿನೂತನ ವಿಶಿಷ್ಟ ನೋಟವನ್ನು ವಿಶ್ವಾಸಾರ್ಹವಾಗಿ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಶಾಮರಾಯರು ಅಭಿನಂದನೀಯರು.

ಯುಜಿ ನಮ್ಮೆಲ್ಲಾ ನಂಬಿಕೆ, ಪರಂಪರೆಗಳನ್ನು ತಿರಸ್ಕರಿಸುತ್ತಾರೆ. ಯಾಕೆಂದರೆ ಈಸಾಕ್ಷಾತ್ಕಾರಎಂಬುದು ಮನಸ್ಸು ವಿಚಾರ ಅನುಭವಗಳಿಂದ ಹೊರತಾದುದು. ಸಾಧನೆ ಪರಿಶ್ರಮಗಳಿಂದ ದೊರಕುವಂತಹದಲ್ಲ. ಇದೊಂದು ಸಹಜ ಜೈವಿಕ ಸ್ಥಿತಿ. ಇದು ಅದರಷ್ಟಕ್ಕೆ ಅದಾಗೇ ಆಗುತ್ತದೆ ಅದರ ಕಾಲದಲ್ಲಿ ನಾವು ತಡೆ ಒಡ್ದದಿದ್ದರೆ. ಜ್ಞಾನ, ಅನುಭವ, ಸಾಧನೆ, ಶೋಧನೆ ಎಲ್ಲವೂ ತಡೆಗಳೇ, ಅವು ನಮ್ಮನ್ನು ಸಹಜ ಸ್ಥಿತಿಯ ವಿರುದ್ಧ ಕೊಂಡೊಯ್ಯುತ್ತದೆ. ನಮಗೂ,  ವಸ್ತು-ಸಂಬಂಧ-ಪ್ರಪಂಚಕ್ಕೂ  ಅಡ್ಡಗೋಡೆಯಾಗಿ ನಿಲ್ಲುತ್ತದೆ. ಯುಜಿಯ ಬದುಕು ಈ ಎಲ್ಲ
-     3 -
ಅಡ್ಡ ಗೊಡೆಗಳ ಕಳಚಿ ಪ್ರಪಂಚದೊಡನೆ ನೇರ ಸಂಪರ್ಕ ಸ್ಪಂದನದಿಂದ ಇರಬಹುದೆಂಬುದನ್ನ ತೋರಿಸಿದ್ದಾರೆ. ಪ್ರತಿಬಿಂಬ ಪ್ರಜ್ಞೆ ( ರಿಫ್ಲೆಕ್ಷಿವ್
ಅವೇರ್ನೆಸ್ಸ್ )  ಆ ಕ್ಷಣದ ಅರಿವಿಗೆ, ಮನಸ್ಸು ವಿಚಾರ ನೆನಪುಗಳನ್ನು ಅಳವಡಿಸದೆ, ಪ್ರತಿಕ್ರಯಿಸುವುದು. ಇದು ಅವರಇರುವಿಕೆಆಗಿತ್ತು. ಅದೊಂದು ಅತ್ಯುತ್ತಮ ಹಾಗೂ ವಿಶಿಷ್ಟ ಬುದ್ಧಿಮತ್ತೆಯ ಸಿಡಿಯಾಗಿರುತ್ತಿತ್ತು.

 ಸಾಮಾನ್ಯವಾಗಿ ಜನರು, ಅದರಲ್ಲೂ ಹೆಚ್ಚಾಗಿ ಯುಜಿಯನ್ನ ನೋಡದೆ, ಬೆರೆಯದೆ ಇರುವವರು, ಇವರದು ನಮ್ಮ ವೇದೋಪನಿಷತ್ತು, ದರ್ಶನ, ಶಾಸ್ತ್ರ ಪುರಾಣಗಳಿಗೆ ಹೊರತಾದದ್ದು, ಅನಾದಿಕಾಲದಿಂದಲೂ ಋಷಿ ಮುನಿಗಳು ಕಂಡು ಮೈದಾಳಿದ ಸತ್ಯವನ್ನು ಅಲ್ಲಗಳೆಯುತ್ತಿದ್ದಾರೆ ಎನ್ನಬಹುದು. ಆದರೆ ಅದು ಸತ್ಯಕ್ಕೆ ದೂರ ಎಂಬುದನ್ನ ಶಾಮರಾಯರು ಈ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದಾರೆ. ನಮ್ಮಲ್ಲಿಯ ಆಚಾರ್ಯ, ಅವದೂತ ( ಮತ್ತು ಕೆಲವರಲ್ಲಿ ಅವೆರಡೂ ಒಂದೇ ಆಗಿರುವ) ಪರಂಪರೆಯನ್ನು ಹೇಳುತ್ತಾ ಹೇಗೆ ಯುಜಿ ಅವರು ಅವಧೂತ ಪರಂಪರೆಗೆ ಸೇರುತ್ತಾರೆ, ಅವಧೂತ ಲಕ್ಷಣಗಳಿಗೆ ಅದೆಷ್ಟು ಹೋಲುತ್ತಾರೆ ಎಂದು ಸುಧೀರ್ಘ ಸುವಿವರ ನಿರೂಪಣೆಯಿಂದ ವಿಶದ ಪಡಿಸುತ್ತಾರೆ. ಈ ದಿಸೆಯಲ್ಲಿ ಶಿವಶರಣ ಶರಣೆಯರು, ಹರಿದಾಸರು, ಬೈರಾಗಿಗಳು, ದತ್ತಾತ್ರೇಯ, ರಾಮಕೃಷ್ಣ
-     4 -
ಪರಮಹಂಸ, ರಮಣ ಮಹರ್ಷಿ, ಶ್ರೀ ಚಂದ್ರಶೇಖರ ಭಾರತಿ ಸ್ವಾಮಿ, . ರಾ. ಬೇಂದ್ರೆಈ ಎಲ್ಲರನ್ನೂ ನಮ್ಮ ಮುಂದೆ ನಿಲ್ಲಿಸುತ್ತಾರೆ ಶಾಮರಾಯರು. ಯುಜಿ ಸ್ಥಿತಿ ಯನ್ನು ವಿವರಿಸಲು ಬೇಂದ್ರೆ ಪದ್ಯದ ನೆರವು ಪಡೆಯುತ್ತಾರೆ. ಹಾಗೆಯೇ ಚಿದಾನಂದಾವಧೂತ, ಸಾವಳಗಿ ಮಹಮದ್ ಸಾಹೇಬ ಇತ್ಯಾದಿ. ಇವರೆಲ್ಲರೂ ಉಪನಿಷತ್ತಿನ ಸತ್ಯದ ಸಾರ ಮೈತಾಳಿದವರೇ. ಹೀಗಾಗಿ, ಶಾಮರಾಯರು ಯುಜಿ ಇಂದ ನಮ್ಮ ಪರಂಪರೆಗೊಂದು ಹೊಸ ಮೆರಗು, ನಮ್ಮ ಪರಂಪರೆಯಿಂದ ಯುಜಿಗೊಂದು ಹೊಸ ಹೊಳಹು ತರುತ್ತಾರೆ.
 ರಾಯರಿಗೆ ಯುಜಿಯಲ್ಲಿ ಇರುವ ಶ್ರದ್ಧೆ, ತನ್ಮಯತೆ, ಸಮೀಪ ಒಡನಾಟ ಎಲ್ಲವೂ ಅವರ ಮಾತಿಗೆ ಅಧಿಕೃತತೆಯನ್ನ ಪ್ರತಿ ಪುಟದಲ್ಲೂ ಕೊಡುತ್ತದೆ. ಯುಜಿ ರೂಪಾಂತರಗೊಂಡ ದೇಹದ ವಿವರ ಮತ್ತು ವರ್ಣಣೆ, ಹಲವಾರು ಶ್ರೇಷ್ಟ ಜ್ಯೋತಿಷಿಗಳ ಸಮಾಗಮ, ಯುಜಿ ಕಡೆಯ ಕ್ಷಣಗಳ ವಿವರಗಳೆಲ್ಲವನ್ನೂ ಹೃದಯಂಗಮವಾಗಿ ಚಿತ್ರಿಸಿದ ರೀತಿ ಅದ್ಭುತವಾಗಿದೆ. ಇದೊಂದು ಕನ್ನಡಕ್ಕೆ ಅಪರೂಪದ ಕೊಡುಗೆಯೇ.
ಶಾಮರಾಯರ ಬರವಣಿಗೆಯಲ್ಲಿ ನಿಖರತೆ, ಸ್ಪಷ್ಟತೆ ಹಾಗೂ ಸಹೃದಯತೆಯ ಭಾವಸಾಗರದಲ್ಲಿ ಮಿಂದ ನಿರ್ಮಲತೆ ಇದೆ. ಓದು ಸುಗಮವಾಗಿ ಸಾಗುತ್ತದೆ. ಕನ್ನಡದ ಬಹು ಜನ ಈ ಪುಸ್ತಕ ಓದಿ, ತಮ್ಮ
-     5 -
ಭ್ರಮೆಗಳನ್ನು ಕಳಚಿಕೊಂಡು, ‘ಆತ್ಮವಂತರಾಗಲು ಒಂದಿಷ್ಟು ಅರ್ಹತೆ ಪಡೆದು ಸ್ವ-ಪರ ಹಿತಕ್ಕೆ ನಾಂದಿಯಾಗಲೆಂದು ಹಾರೈಸುತ್ತೇನೆ.  
ಬೆಂಗಳೂರು                                           





No comments: