Monday, June 7, 2010

Literature and Social Health - Memorial Lecture in PowerPoint Presentation


ಸಾಹಿತ್ಯ ಮತ್ತು ಸಾಮಾಜಿಕ  ಸ್ವಾಸ್ಥ್ಯ 
ಎಂ. ಎಸ್. ತಿಮ್ಮಪ್ಪ

೧೧  ನೇ ಮಾಸ್ತಿ ಸ್ಮಾರಕ ವಿಶೇಷ ವಾರ್ಷಿಕ ಉಪನ್ಯಾಸ ೨೦೧೦ 
ಸಾಹಿತ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ
            ಮಾಸ್ತಿಗೆ ನುಡಿ ನಮನ     

    “ದೊಡ್ಡವರ ಸಂಖ್ಯೆ ಕಡಮೆ. ಅವರ ಕಷ್ಟಸುಖವನ್ನು ಅವರು ನೋಡಿಕೊಳ್ಳಬಲ್ಲರು; ತಿಳಿದುಕೊಳ್ಳಬಲ್ಲರು. ಸಾಮಾನ್ಯರ ಸಂಖ್ಯೆ ಬಹು ದೊಡ್ಡದು. ಅವರ ಕಷ್ಟ ಸುಖವನ್ನು ಪ್ರಪಂಚ ನೋಡಿಕೊಳ್ಳಬೇಕಾಗುತ್ತದೆ. ಈ ಸಾಮಾನ್ಯ ವ್ಯಕ್ತಿತ್ವದ ಸಾಮಾನ್ಯ ಅನುಭವವೇನು ಎನ್ನುವುದನ್ನು ತಿಳಿದೇ ಸಮಾಜ ಬಹು ಜನಕ್ಕೆ ಯಾವುದು ಒಳ್ಳೆಯದೆಂಬುದನ್ನು ಗ್ರಹಿಸಬಹುದು, ಪ್ರಯೋಗಿಸಬಹುದು, ನಡೆಸಬಹುದು. ಈ ಕಾರಣದಿಂದ ಮಹನೀಯವಲ್ಲದಿದ್ದರೂ, ಇಂಥ ಒಂದುಬಾಳುವೆಯ ಅನುಭವವನ್ನು ಲೋಕ ಅರಿಯುವುದು ಅವಶ್ಯಕ.”
                                                                       …………                   
               ನುಡಿ ನಮನ

    “ಎಷ್ಟು ಸಣ್ಣದಾದರೂ ಈ ಬದುಕು ಲೋಕದ  ಬದುಕಿನಲ್ಲಿ  ಒಂದು ಅಂಗ. ವಿಶ್ವದ ಜೀವನ ತನ್ನನ್ನು ತಾನು ನೋಡಿಕೊಳ್ಳುವುದಕ್ಕೆ ಈ ಕೋಟ್ಯಂತರ ಜೀವನದಲ್ಲಿ ಆಕಾರಗೊಂಡಿದೆ. ಅದರಲ್ಲಿ ಈ ಒಂದೊಂದು ಕಣವೂ ಒಂದು ಕೇಂದ್ರ. ಸೃಷ್ಟಿಯೆಲ್ಲಾ ಒಂದು. ಈ ಒಂದು ಬದುಕೇ ಒಂದು.” 
    “ಜೀವನ ಎಷ್ಟುಮಟ್ಟಿಗೆ ಸಾಮನ್ಯ ರೀತಿಯಾದಾದರೆ ಅಷ್ಟುಮಟ್ಟಿಗೆ ಅದು ಈ ರೀತಿಯ ಪ್ರಾತಿನಿಧ್ಯವನ್ನು ಸಾಧಿಸುತ್ತದೆ. ನಾನು ಪರಿಶೀಲಿಸುವ ಜೀವನ ಈ ರೀತಿಯಾಗಿ ಬಹುಜನದ  ಜೀವನದ ಪ್ರತಿನಿಧಿ ಎಂದು ನನ್ನ ನಂಬಿಕೆ.”  
    ಮಾಸ್ತಿ ವೆಂಕಟೇಶ ಅಯ್ಯಂಗಾರ್(೨೦೦೮) ಭಾವ-ಭಾಗ೧, ಪುಟ೧-೨
ಸಾಹಿತ್ಯ

    ಸೃಜನಶೀಲ ಸಾಹಿತ್ಯ 
    • ಕಾವ್ಯ, ಕತೆ, ಕಾದಂಬರಿ, ನಾಟಕ, ಹಾಸ್ಯ ಬರಹಗಳು

    ವಿಜ್ಞಾನ ಸಾಹಿತ್ಯಃ 
    • ಮನೋವಿಜ್ಞಾನ, ಸಮಾಜವಿಜ್ಞಾನ, ತತ್ವಶಾಸ್ತ್ರ ಇತ್ಯಾದಿ
ಸಾಮಾಜಿಕ  ಸ್ವಾಸ್ಥ್ಯ

    • ಸಂಬಂಧಗಳು, ಕುಟುಂಬ, ಸಂಸ್ಥೆ, ರಾಜ್ಯ, ರಾಷ್ಟ್ರ- ಶಾಂತಿ

    • ಬಡತನ, ಅಪರಾಧ, ದುರ್ವ್ಯಸನ-ದುಶ್ಚಟಗಳು, ವಿವಾಹ ವಿಚ್ಛೇದಗಳ -  ಪ್ರಮಾಣ

    • ಮಹಿಳೆ, ಹಿಂದುಳಿದವರು, ಅಲ್ಪಸಂಖ್ಯಾತರು, ಅಬಲರ -  ಸ್ಥಾನಮಾನ

    • ಜಾತಿ, ಮತ, ಧರ್ಮ, ರಾಜಕೀಯ - ಕಲಹಗಳು
ಮಾನಸಿಕ  ಸ್ವಾಸ್ಥ್ಯ


    • ಪ್ರೀತಿ ಮತ್ತು ಕ್ರಿಯಾಶೀಲತೆ – ಸಾಮರ್ಥ್ಯ

    • ದುಗುಡ-ದುಮ್ಮಾನ, ಆತಂಕ-ಅಳಕು, ಅಂಜಿಕೆ, ಖಿನ್ನತೆ

    • ನೀತಿ-ನಿಯಮ  ಬಾಹಿರ  ನಡವಳಿಕೆಗಳು
ಸಾಹಿತ್ಯ ಮತ್ತು ಮಾನಸಿಕ ಸ್ವಾಸ್ಥ್ಯ- ೧

    ಸುಪ್ತ  ಬಯಕೆಗಳ  ಭ್ರಾಮಕ  ಈಡೇರಿಕೆ 
    • ಅವ್ಯಕ್ತ  ಅನುಭವ -  ಪದಗಳಲ್ಲಿ  ಪ್ರಕಟ

    • ಅಗತ್ಯ/ಬಯಕೆ  ಗಳ  ಕ್ಷಣಿಕ, ಭ್ರಾಮಕ  ಪೂರೈಕೆ

    • ಕನಸು – ಹಗಲುಗನಸುಗಳ  ಸಾಮ್ಯ
      • ಸಾಹಿತ್ಯದ ‘ನಾಯಕ’ ನಲ್ಲಿ  ಓದುಗನ  ತಾದಾತ್ಮ್ಯತೆ
    ಸಾಹಿತ್ಯ ಮತ್ತು ಮಾನಸಿಕ ಸ್ವಾಸ್ಥ್ಯ - ೨

      ಅನುಭವ ಶೋಧ – ಆಗುವಿಕೆ. 
      • ಅನುಭವ  ವೈಶಾಲ್ಯ – ಸಾಧ್ಯತೆಗಳ  ಸಾಕ್ಷಾತ್ಕಾರ

      • ಆದರ/ಪ್ರೀತಿಯ ಬಯಕೆ – ತಾನಾಗುವ  ಅಗತ್ಯ

      • ಆದರಕ್ಕಾಗಿ  ತಾನಾಗುವುದರ  ಕಡೆಗಣಿಕೆ

      • ಸಾಹಿತ್ಯ, ಅನುಭವ ಶೋಧದಿಂದ ತನ್ನನ್ನು ಕಂಡುಕೊಳ್ಳುವ ಕ್ರಿಯೆ
    ಸಾಹಿತ್ಯ ಮತ್ತು ಮಾನಸಿಕ ಸ್ವಾಸ್ಥ್ಯ - ೩

      • ಪ್ರಜ್ಞೆ – ಎತ್ತರ, ವಿಸ್ತಾರ.

      • ಪ್ರಜ್ಞಾವಸ್ಥೆಗಳು – ವಸ್ತು ಗ್ರಹಣೆ

      • ಜ್ಞಾನ - ಪ್ರಜ್ಞಾವಸ್ಥೆಯ ನಿರ್ಮಾಣ

      • ತುರಿಯಾವಸ್ಥೆ - ‘ಶಾಂತ ಎಚ್ಚರ’ ದ ಹೊಳಹು - ಸಾಹಿತ್ಯ
    ಸಾಹಿತ್ಯ  ಮತ್ತು  ಸಮಾಜ

      • ಅನುಭವ  ವಿಸ್ತಾರ, ಸಾಧ್ಯತೆಗಳು

      • ವೈಚಾರಿಕ  ಕ್ರಾಂತಿ

      • ಪ್ರೋತ್ಸಾಹ/ಪುರಸ್ಕಾರ,  ತಿರಸ್ಕಾರ

      • ಸಾಹಿತ್ಯ  ಸಮಾಜದ  ಕೂಸು
    ಸಾಹಿತ್ಯ  ಮತ್ತು  ಸಾಮಜಿಕ ಸ್ವಾಸ್ಥ್ಯ

      • ಸಾಹಿತಿಯ  ಎಚ್ಚರ  ಮತ್ತು  ಸೂಕ್ಷ್ಮಗ್ರಾಹಿತ್ವ

      • ಅನಿಷ್ಟಗಳ  ಮೇ ಲೆ  ಬೆಳಕು

      • ಭ್ರಷ್ಟತೆ  ಅನಾಚಾರಗಳ  ಬಯಲು

      • ಆತಂಕ, ಸ್ತಿತ್ಯಂತರಗಳ  ಸೂಚನೆ – ವಿವೇಚನೆ
    ವ್ಯಕ್ತಿ – ಸಮಾಜ - ಸಾಹಿತ್ಯ


      • ಕಟ್ಟುಪಾಡುಗಳು, ಆಚಾರ-ವಿಚಾರ, ಪದ್ದತಿ-ಪರಂಪರೆ

      • ಸಾಮಾಜಿಕ ಪಿಡುಗುಃ  ವರದಕ್ಷಿಣೆ, ಬಾಲ್ಯ/ವಿಧವಾ ವಿವಾಹ,  ಮಹಿಳಾ ಶೋಷಣೆ

      • ಪ್ರಭಾವ – ಪರಿಣಾಮಗಳು.
    ಸಮಾಜ ಸ್ವಾಸ್ಥ್ಯ – ಸಾಹಿತ್ಯದ ಕೊಡುಗೆ

      • ಅಂತರಂಗದ ಶೋಧ – ಅಭಿವ್ಯಕ್ತಿ

      • ಅರಿವು, ತಿಳುವಳಿಕೆ ವಿಸ್ತಾರ

      • ಸಮಸ್ಯೆಯ ಬಹುಮುಖ ಆಯಾಮ, ಸಮಗ್ರ ಪರಿಕಲ್ಪನೆ

      • ಕಾರ್ಯೂನ್ಮುಖತೆ  - ಪ್ರೇರಣೆ  

    No comments: