ಶಿಕ್ಷೆಗೊಳಗಾಗದ ಸರ್ಕಾರ
ಅತ್ಯಾಚಾರಿಗಳು ಮಹಾ ಫಾತಕಿಗಳು. ಅವರನ್ನು ರಕ್ಷಿಸುವ ಸರ್ಕಾರ ಶಿಕ್ಸೆಗೆ ಒಳಗಾಗದ ಇನ್ನಷ್ಟು ಮಹಾ ಫಾತಕಿಗಳು. ಅಮಾಯಕರನ್ನು, ಅನುಮಾನಾಸ್ಪದ ವ್ಯಕ್ತಿಗಳನ್ನು ಹಿಂಸಿಸಿ "ತಪ್ಪು" ಒಪ್ಪಿಸಿಕೊಂಡು ಇಡೀ ವಾಸ್ತವವನ್ನೇ ಯಾಮಾರಿಸುವ ಪೋಲೀಸರು. ಸಂಸ್ಥೆಯ ಆಡಳಿತಗಾರನ ಲೋಪದೋಷ ಕಂಡುಬಂದರೂ, ಅದಕ್ಕಾಗಿ ಹೆದರಿ ತಲೆಮರೆಸಿಕೊಂಡು ದೇಶವನ್ನೇ ಬಿಡಲು ತಯಾರಿ ನಡೆಸಿದ್ದರೂ, ಅವರ ಮೇಲೆ ಯಾವ ಆಪಾದನೆ ಹಾಕದೆ ಬಿಡುತ್ತಾರೆ. ಅಪರಾಧ ಮಾಡಿದವರು ತಾವು ಪಾರಾಗಬಹುದು ( ಹಣ, ಜಾತಿ, ಅಂತಸ್ತು, ಅಧಿಕಾರ ಬಲದಿಂದ ) ಎನ್ನುವ ವಾತಾವರಣ ನಿರ್ಮಾಣವಾದಾಗ ದಾರಾಳವಾಗಿ ದುಷ್ಕೃತ್ಯ ಮಾಡಲು ಅಂತಹ ಜನ ಮುಂದಾಗುತ್ತಾರೆ. ಅತ್ಯಾಚಾರಿಗಳಷ್ಟೇ ಮಹಾ ದುಷ್ಕೃತ್ಯ ಸರ್ಕಾರ ಅವರನ್ನು ಬಚಾಯಿಸಿ ಮಾಡುತ್ತದೆ, ಈ ಸರ್ಕಾರಕ್ಕೆ ಶಿಕ್ಷೆ ಇಲ್ಲವೇ? ಐದೋ ಹತ್ತೋ ವರ್ಷಕ್ಕೆ ಚುನಾವಣೆಯಲ್ಲಿ ಸರ್ಕಾರ ಸೋಲಿಸಬಹುದು, ಆದರೆ ಸೋಲು ಶಿಕ್ಷೆ ಆಗಬೇಕಾಗಿಲ್ಲ. ಆದರೂ ಅದು ವ್ಯಕ್ತಿಗತವಾಗುವುದಿಲ್ಲ, ದುರ್ನಿರ್ಧಾರಗಳಿಂದ ವ್ಯಕ್ತಿ, ಸಮಾಜಕ್ಕೆ ನೋವುಂಟುಮಾಡಿದುದರ ಫಲ ಆಯಾ ವ್ಯಕ್ತಿಗಳು ಅನುಭವಿಸುವಂತಾಗುವುದಿಲ್ಲ. ಒಮ್ಮೆ ಶಿಕ್ಷೆಯಂತಾದರು ಎಷ್ಟೋ ವರ್ಷಗಳ ನಂತರ. Justice delayed is justice denied/ನ್ಯಾಯದ ವಿಳಂಬ ನ್ಯಾಯದ ನಿರಾಕರಣೆ. 'ಪ್ರಭು' ಪ್ರಜೆಗಳ ಮಧ್ಯೆ ಏರ್ಪಡುವ ವಿಶ್ವಾಸದ ಕಂದಕ ಪ್ರಜಾಪ್ರಭುತ್ವಕ್ಕೇ ಮಾರಕ. ಸಾಮಾನ್ಯ, ಪ್ರಾಮಾಣಿಕ, ಪ್ರಜೆಯ ಕಂಗಾಲು ನಿರಂತರ

No comments:
Post a Comment